ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ

DEPARTMENT OF ELECTRONICS, INFORMATION TECHNOLOGY, BIOTECHNOLOGY   


ಐಟಿ ಇಲಾಖೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಪ್ರಾರಂಭವನ್ನು ಪಡೆದುಕೊಂಡಿತು ಮತ್ತು ಕರ್ನಾಟಕವು ತನ್ನದೇ ಆದ ಐಟಿ ನೀತಿಯನ್ನು ರೂಪಿಸಿದ ಮೊದಲ ರಾಜ್ಯವಾಗಿದೆ. ಕರ್ನಾಟಕ 1998 ರಲ್ಲಿ ತಂತ್ರಜ್ಞಾನದಲ್ಲಿ ತನ್ನ ಆವಿಷ್ಕಾರಗಳನ್ನು ಪ್ರಾರಂಭಿಸಿತು ಮತ್ತು ಬಿಟಿ ವಿಭಾಗವನ್ನು 2001 ರಲ್ಲಿ ಐಟಿ ವಿಭಾಗಕ್ಕೆ ಸೇರಿಸಲಾಯಿತು.

 ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 

   ವಿದ್ಯುನ್ಮಾನ, ಮಾತಂ ಮತ್ತು ಜೈತಂ ನಿರ್ದೇಶನಾಲಯದ ಕಾರ್ಯ ವ್ಯವಸ್ಥೆ ಪಕ್ಷಿನೋಟ

Department Info

ಪೀಠಿಕೆ:

 

ಕರ್ನಾಟಕರಾಜ್ಯಸರ್ಕಾರದಇಲಾಖೆಗಳಲ್ಲಿಗಣಕೀಕರಣಮಾಡುವಉದ್ದೇಶದಿಂದಕರ್ನಾಟಕಸರ್ಕಾರಿಗಣಕಕೇಂದ್ರವನ್ನುಪ್ರಾರ್ಥಮಿಕವಾಗಿಆರ್ಥಿಕಮತ್ತುಸಾಂಖ್ಯಿಕಇಲಾಖೆಯಅಧೀನದಲ್ಲಿ 1971ರಲ್ಲಿಪ್ರಾರಂಭಿಸಲಾಯಿತು.  ಕಾಲಕಾಲಕ್ಕೆ ಹೆಚ್ಚಾದ ಗಣಕೀಕರಣ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಅನುವಾಗುವಂತೆ ಕರ್ನಾಟಕ ಸರ್ಕಾರಿ ಗಣಕ ಕೇಂದ್ರವು ಪ್ರತ್ಯೇಕವಾದ ಶಾಖೆಯಾಗಿ ಮಾರ್ಪಾಡಾಗಿ ಯೋಜನಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿತ್ತು.  ವಿಶ್ವ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಬದಲಾವಣೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರಿ ಗಣಕ ಕೇಂದ್ರವನ್ನು ಯೋಜನಾ ಇಲಾಖೆಯಿಂದ ಬೇರ್ಪಡಿಸಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ “ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯ”ವೆಂದು ಮರುನಾಮಕರಣದೊಂದಿಗೆ ಅಸ್ಥಿತ್ವಕ್ಕೆ ಬಂದಿತು. ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉನ್ನತೀಕರಣ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಸ್ಥಾಪಿಸಲಾಗಿತ್ತು. ತದನಂತರ ಜೈವಿಕ ತಂತ್ರಜ್ಞಾನ ವಲಯದ ಅಭಿವೃದ್ದಿಗಾಗಿ ಸದರಿ ಕ್ಷೇತ್ರವನ್ನು ಈ ನಿರ್ದೇಶನಾಲಯಕ್ಕೆ ಸೇರಿಸಿಕೊಳ್ಳಲಾಯಿತು. ಕರ್ನಾಟಕ ಸರ್ಕಾರಿ ಗಣಕ ಕೇಂದ್ರವು ನಿರ್ವಹಿಸುತ್ತಿದ್ದ ಗಣಕೀಕರಣ ಹಾಗೂ ತರಬೇತಿ ಕಾರ್ಯವನ್ನು ಸಿ.ಆಸು.ಇ ಇಲಾಖೆಯ ಅಧೀನದಲ್ಲಿ ಸೃಷ್ಟಿಯಾದ ಇ-ಆಡಳಿತ ಶಾಖೆಗೆ ವಹಿಸಲಾಯಿತು.

 

 ಕಾರ್ಯವ್ಯವಸ್ಥೆ:

 

ವಿದ್ಯುನ್ಮಾನ, ಮಾಹಿತಿತಂತ್ರಜ್ಞಾನಮತ್ತುಜೈವಿಕತಂತ್ರಜ್ಞಾನನಿರ್ದೇಶನಾಲಯದಲ್ಲಿಭಾರತೀಯಆಡಳಿತಸೇವೆಯಅಧಿಕಾರಿಯುನಿರ್ದೇಶಕರಾಗಿದ್ದು, ಇವರುಇಲಾಖಾಮುಖ್ಯಸ್ಥರಾಗಿರುತ್ತಾರೆ. ಮಾಹಿತಿತಂತ್ರಜ್ಞಾನಮತ್ತುಜೈವಿಕತಂತ್ರಜ್ಞಾನನಿರ್ದೇಶನಾಲಯದನಿರ್ದೇಶಕರು, ಮಾಹಿತಿತಂತ್ರಜ್ಞಾನಮತ್ತುಜೈವಿಕತಂತ್ರಜ್ಞಾನಇಲಾಖೆಯಅಧೀನದಲ್ಲಿರುವಕರ್ನಾಟಕನಾವಿನ್ಯತೆಮತ್ತುತಂತ್ರಜ್ಞಾನಸೊಸೈಟಿ (ಕಿಟ್ಸ್)ಯಪದನಿಮಿತ್ತವ್ಯವಸ್ಥಾಪಕನಿರ್ದೇಶಕರಾಗಿರುತ್ತಾರೆ. 

ಇಲಾಖೆಯ ನಿರ್ದೇಶನದಂತೆ, ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ, ಇವರು ಈ ಕೆಳಕಂಡ ಮುಖ್ಯ ಕಾರ್ಯಚಟುವಟಿಕೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ:

 • ರಾಜ್ಯದ ದ್ವಿತೀಯ ಹಾಗೂ ತೃತೀಯ ದರ್ಜೆ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತೀಕರಣ ಹಾಗೂ ಅಭಿವೃದ್ದಿ ಕಾರ್ಯ.
 • ಸ್ವದೇಶಿ ಹಾಗೂ ವಿದೇಶೀಯ ಬಂಡವಾಳವನ್ನು ಆಕರ್ಷಿಸಲು ಕ್ರಮ ಕೈಗೊಳ್ಳುವುದು.
 • ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಇ.ಎಸ್.ಡಿ.ಎಂ, ಅನಿಮೇಷನ್, ಸ್ಟಾರ್ಟ್ ಅಫ್ ಇತ್ಯಾದಿ ನೀತಿಗಳನ್ನು ಅನುಷ್ಟಾನಗೊಳಿಸುವುದು.
 • ಐಐಐಟಿ-ಬಿ, ಐಬಿಎಬಿ ಹಾಗೂ ಮಾನವನ ತಳಿ ಶಾಸ್ತ್ರ ಮುಂತಾದ ವಿದ್ಯಾ ಸಂಸ್ಥೆ/ ಸಂಶೋಧನಾ ಸಂಸ್ಥೆಗಳಿಗೆ ಆರ್ಥಿಕ ಧನ ಸಹಾಯ ಒದಗಿಸುವುದು.
 • ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮೇಳಗಳು, ಸಮಾವೇಷ, ಕಾರ್ಯಾಗಾರ ಮುಂತಾದವುಗಳನ್ನು ಆಯೋಜಿಸುವುದು ಹಾಗೂ ಭಾಗವಹಿಸುವುದು.
 • ಕಿಟ್ಸ್, ಕಿಯೋನಿಕ್ಸ್ ಇತ್ಯಾದಿ ಸಂಸ್ಥೆಗಳಿಗೆ ಆಯವ್ಯಯದಲ್ಲಿ ಸರ್ಕಾರಿ ಕಾರ್ಯಕ್ರಮಗಳು / ಯೋಜನೆಗಳನ್ನು ಅನುಷ್ಟಾನಗೊಳಿಸಲು ಒದಗಿಸಲಾದ ಅನುದಾನವನ್ನು ಬಿಡುಗಡೆಗೊಳಿಸುವುದು. 
 • ಹುಬ್ಬಳ್ಳಿ ಮಾಹಿತಿ ತಂತ್ರಜ್ಞಾನ ಪಾರ್ಕ್‍ನ ಆಡಳಿತ ನಿರ್ವಹಣೆ.

ಅಧಿಕಾರಿ/ಸಿಬ್ಬಂದಿಗಳು

ಕರ್ತವ್ಯ ನಿರ್ವಹಣೆ

ನಿರ್ದೇಶಕರು

ವಿದ್ಯುನ್ಮಾನಮಾಹಿತಿತಂತ್ರಜ್ಞಾನಮತ್ತುಜೈವಿಕತಂತ್ರಜ್ಞಾನನಿರ್ದೇಶನಾಲಯದಲ್ಲಿಭಾರತೀಯಆಡಳಿತಸೇವೆಗೆಸೇರಿದಅಧಿಕಾರಿಯುನಿರ್ದೇಶಕರಾಗಿದ್ದು, ಇವರುನಿರ್ದೇಶನಾಲಯದಆಡಳಿತವ್ಯವಸ್ಥೆಯನ್ನುಹಾಗೂಇಲಾಖೆಗೆಸಂಬಂಧಿಸಿದತಾಂತ್ರಿಕಕಾರ್ಯಗಳನ್ನುನಿರ್ವಹಿಸಲುನಿರ್ದೇಶನನೀಡುತ್ತಾರೆಹಾಗೂಸದರಿಯವರುಕಿಟ್ಸ್ಸಂಸ್ಥೆಯಪದನಿಮಿತ್ತವ್ಯವಸ್ಥಾಪಕನಿರ್ದೇಶಕರಹುದ್ದೆಯಲ್ಲೂಕಾರ್ಯನಿರ್ವಹಿಸುತ್ತಾರೆ.

ಮಾಹಿತಿ ಹಕ್ಕು ಅಧಿನಿಯಮದನ್ವಯ ಇವರು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಆಗಿರುತ್ತಾರೆ.

DqÀ½vÁ¢üPÁjUÀ¼ÀÄ

ಆಡಳಿತಾಧಿಕಾರಿಗಳು ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯದಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯು ಆಡಳಿತಾಧಿಕಾರಿಗಳಾಗಿದ್ದು, ಇವರು ನಿರ್ದೇಶನಾಲಯದ ಆಡಳಿತ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ನಿರ್ವಹಿಸುತ್ತಾರೆ ಹಾಗೂ ನಿರ್ದೇಶನಾಲಯದಲ್ಲಿರುವ ಅಧಿಕಾರಿ/ ಸಿಬ್ಬಂದಿ ವರ್ಗದವರ, ಇ-ಆಡಳಿತ ಸಚಿವಾಲಯದಲ್ಲಿ ಕಾರ್ಯ ವ್ಯವಸ್ಥೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿ ಮತ್ತು ಇತರೆ ಇಲಾಖೆಗಳಲ್ಲಿ ಅನ್ಯ ಕರ್ತವ್ಯದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯದ ಅಧಿಕಾರಿ/ ಸಿಬ್ಬಂದಿ ವರ್ಗದವರ ವೇತನ ಭತ್ಯೆಗಳು, ನಿವೃತ್ತಿ ವೇತನಗಳು ಮತ್ತಿತರ ಆಡಳಿತಾತ್ಮಕ ವೆಚ್ಚಗಳನ್ನು ಖಜಾನೆಯಿಂದ ಡ್ರಾ ಮಾಡಿ ವಿತರಿಸಲು ಅಧಿಕೃತಗೊಂಡಿರುತ್ತಾರೆ.  ಇದರೊಂದಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಒದಗಿಸಲಾಗಿರುವ ಅನುದಾನದ ಮೇಲೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವ ಅನುದಾನ ಮತ್ತಿತರ ವೆಚ್ಚಗಳನ್ನು ನಿರ್ದೇಶಕರ ಪೂರ್ವಾನುಮೋದನೆಯ ಮೇಲೆ ಖಜಾನೆಯಿಂದ ಡ್ರಾ ಮಾಡಿ ವಿತರಿಸುತ್ತಾರೆ. ಆಡಳಿತಾಧಿಕಾರಿಗಳ ನಿಯಂತ್ರಣದಲ್ಲಿ ಆಡಳಿತ ಶಾಖೆ ಹಾಗೂ ಲೆಕ್ಕ ಶಾಖೆಗಳು ಇರುತ್ತವೆ.  

ಲೆಕ್ಕ ಅಧೀಕ್ಷಕರು

ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ನಿಯೋಜಿಸಲ್ಪಟ್ಟ ಲೆಕ್ಕ ಅಧೀಕ್ಷಕರು ಲೆಕ್ಕಶಾಖೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಪ್ರಥಮ ದರ್ಜೆ ಸಹಾಯಕರ ಹಾಗೂ ಬೆರಳಚ್ಚುಗಾರರ ನೆರವಿನೊಂದಿಗೆ ನಿರ್ವಹಿಸುತ್ತಾರೆ.  

ಮೇಲ್ವಿಚಾರಕರು

ಮೇಲ್ವಿಚಾರಕರು ಆಡಳಿತ ಅಧಿಕಾರಿಯವರ ಆದೇಶದಂತೆ ಇಲಾಖೆಗೆ ಸಂಬಂಧಿಸಿದ ವಿಧಾನಸಭೆ/ವಿಧಾನ ಪರಿಷತ್ತುಗಳ ಪ್ರಶ್ನೆಗಳಿಗೆ ಉತ್ತರಿಸಲು ಮಾಹಿತಿ ಸಂಗ್ರಹಣೆ, ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಿಗೆ ಸಂಬಂಧಿಸಿದ ಕಡತ ನಿರ್ವಹಣೆ, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದ ಕಡತ ನಿರ್ವಹಣೆ, ವಾರ್ಷಿಕ ವರದಿ ಹಾಗೂ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ನೇಮಕಾತಿ, ನಿಯೋಜನೆ ಹಾಗೂ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುತ್ತಾರೆ.

ಪ್ರಥಮ ದರ್ಜೆ ಸಹಾಯಕರು

ನಿರ್ದೇಶನಾಲಯದಲ್ಲಿ ಪ್ರಸ್ತುತ ಒಬ್ಬರು ಪ್ರಥಮ ದರ್ಜೆ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದು, ಇವರು ನಿರ್ದೇಶನಾಲಯಕ್ಕೆ ಸಂಬಂಧಿಸಿದ ಕಛೇರಿ ನಿರ್ವಹಣೆಗೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿ ಹಾಗೂ ಆಡಳಿತ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತಾರೆ.

ಬೆರಳಚ್ಚುಗಾರರು

ಪ್ರಸ್ತುತ ನಿರ್ದೇಶನಾಲಯದಲ್ಲಿ ಇಬ್ಬರು ಕನ್ನಡ ಬೆರಳಚ್ಚುಗಾರರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ನಿರ್ದೇಶನಾಲಯಕ್ಕೆ ಸಂಬಂಧಿಸಿದ ಎಲ್ಲಾ ಶಾಖೆಯ ಬೆರಳಚ್ಚು ಕಾರ್ಯಗಳನ್ನು ಹಾಗೂ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಸ್ವೀಕೃತಿ/ರವಾನೆ ಕಾರ್ಯ ಹಾಗೂ ಲೆಕ್ಕ ಶಾಖೆಗೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುತ್ತಾರೆ.          

vÁAwæPÀ ±ÁSÉ:

C¢üPÁj/¹§âA¢UÀ¼ÀÄ

PÀvÀðªÀå ¤ªÀðºÀuÉ

ಸಿಸ್ಟಮ್ಸ್ ಮ್ಯಾನೇಜರ್

ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯದಲ್ಲಿ ಒಬ್ಬ ಸಿಸ್ಟಮ್ಸ್ ಮ್ಯಾನೇಜರ್ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿದ್ದು, ನಿರ್ದೇಶನಾಲಯದ ತಾಂತ್ರಿಕ ವಿಷಯಗಳು, ಟ್ಯಾಪ್ ಸಭೆಗಳು, ಇ-ವೇಸ್ಟ್, ವೈ-ಫೈ ಇತ್ಯಾದಿಗಳ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸದರಿ ಅಧಿಕಾರಿಯು ವಯೋ ನಿವೃತ್ತಿಯನ್ನು ಹೊಂದಿರುವುದರಿಂದ ಇವರ ಕರ್ತವ್ಯವನ್ನು ಸಿಸ್ಟಮ್ಸ್ ಅನಾಲಿಸ್ಟ್‍ರವರು ಹೆಚ್ಚುವರಿ ಪ್ರಭಾರದೊಂದಿಗೆ ನಿರ್ವಹಿಸುತ್ತಿದ್ದಾರೆ.  

ಸಿಸ್ಟಮ್ಸ್ ಅನಾಲಿಸ್ಟ್

ನಿರ್ದೇಶನಾಲಯದಲ್ಲಿ ಪ್ರಸ್ತುತ ಇಬ್ಬರು ಸಿಸ್ಟಮ್ಸ್ ಅನಾಲಿಸ್ಟ್ ಅಧಿಕಾರಿಗಳಿದ್ದು, ಒಬ್ಬ ಅಧಿಕಾರಿಯು ನಿರ್ದೇಶನಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದು,್ದ ಇವರು ಸಿಸ್ಟ್ಟಮ್ಸ್ ಮ್ಯಾನೇಜರ್ ಅವರು ನಿರ್ವಹಿಸುತ್ತಿದ್ದ ಕಾರ್ಯವನ್ನು ನಿರ್ವಹಿಸುತ್ತಿರುವುದರ ಜೊತೆಗೆ ಕಿಟ್ಸ್ ಸಂಸ್ಥೆಯಲ್ಲಿ ಅನ್ಯಕಾರ್ಯ ನಿಮಿತ್ತ, ಪ್ರಧಾನ ವ್ಯವಸ್ಥಾಪಕರು-3 ಹುದ್ದೆಯಲ್ಲಿ ಹಾಗೂ ಏಕಗವಾಕ್ಷಿ ಕೇಂದ್ರ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಮತ್ತೊಬ್ಬ ಅಧಿಕಾರಿಯು ಅನ್ಯಕಾರ್ಯ ನಿಮಿತ್ತ ಸಿಆಸುಇ(ಇ-ಆಡಳಿತ)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೀನಿಯರ್ ಪ್ರೋಗ್ರಾಮರ್

ಪ್ರಸ್ತುತ ನಿರ್ದೇಶನಾಲಯದಲ್ಲಿ 2 ಸೀನಿಯರ್ ಪ್ರೋಗ್ರಾಮರ್ ವೃಂದದ ಹುದ್ದೆಯು ಭರ್ತಿಯಾಗಿರುತ್ತದೆ. ನಿರ್ದೇಶನಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಸೀನಿಯರ್ ಪ್ರೋಗ್ರಾಮರ್ ವೃಂದದ ಅಧಿಕಾರಿಗಳಲ್ಲಿ ಒಬ್ಬರು ಇ.ಎಸ್.ಡಿ.ಎಂ, ಸಕಾಲ, ಹೆಚ್.ಆರ್.ಎಂ.ಎಸ್ ಮೈಸೂರು ಇ.ಎಸ್.ಡಿ.ಎಮ್ ಕ್ಲಸ್ಟರ್, ಹುಬ್ಬಳ್ಳಿಯಲ್ಲಿ ವಿ.ಎಲ್.ಎಸ್.ಐ ಮತ್ತು ಬ್ರೌನ್ ಫೀಲ್ಡ್ ಇ.ಎಸ್.ಡಿ. ಎಮ್ ಕ್ಲಸ್ಟರ್, ಸೆಮಿಂಡಕ್ಟರ್ ಫ್ಯಾಬ್ಲೆಸ್ ಆಕ್ಸಿಲರೇಶನ್ ಲ್ಯಾಬ್‍ಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತಿದಾರೆ. ಮತ್ತೊಬ್ಬ ಸೀನಿಯರ್ ಪ್ರೋಗ್ರಾಮರ್ ಅಧಿಕಾರಿಯವರು ನಿರ್ದೇಶನಾಲಯ ಹಾಗೂ ಕಿಟ್ಸ್ ಸಂಸ್ಥೆಗೆ ಸಂಬಂಧಿಸಿದಂತೆ ಇ-ಆಫೀಸ್, ಇ-ಸಮೀಕ್ಷೆ, ಸಿ.ಎಮ್. ಡ್ಯಾಷ್ ಬೋರ್ಡ್, ಪ್ರತಿಬಿಂಬ, ಡಿಎಸ್‍ಎಸ್, ಕೆಡಿಪಿ, ಐಬಿಪಿಎಸ್, ಐಟಿ ರಿಜಿಸ್ಟ್ರೇಷನ್, ಪವರ್ ಟ್ಯಾರಿಫ್ ಕನೆಕ್ಷನ್, ಸ್ಟ್ಯಾಂಪ್ ಡ್ಯೂಟಿ ಎಕ್ಸಂಷನ್, ಪಿಎಫ್/ಇಎಸ್‍ಐ ಮರುಪಾವತಿ ಹುಬ್ಬಳ್ಳಿ ಐಟಿ ಪಾರ್ಕ್‍ಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತದ್ದಾರೆ.

ಜೂನಿಯರ್ ಪ್ರೋಗ್ರಾಮರ್

ಪ್ರಸ್ತುತ ನಿರ್ದೇಶನಾಲಯದಲ್ಲಿ 4 ಜೂನಿಯರ್ ಪ್ರೋಗ್ರಾಮರ್ ವೃಂದದ ಹುದ್ದೆಯು ಭರ್ತಿಯಾಗಿದ್ದು, ಅವರುಗಳಲ್ಲಿ ಒಬ್ಬರು ಜೂನಿಯರ್ ಪ್ರೋಗ್ರಾಮರ್ ರವರು ಎ.ಎಂ.ಎಸ್ ಹಾಗೂ ಆದಾಯ ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ಮತ್ತು ಹುಬ್ಬಳ್ಳಿ ಐಟಿ ಪಾರ್ಕ್ ನಿರ್ವಹಣೆಗೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುತ್ತಾರೆ.  ಇನ್ನೊಬ್ಬರು ಜೂನಿಯರ್ ಪ್ರೋಗ್ರಾಮರ್ ವೃಂದದ ಅಧಿಕಾರಿಯು ಆಡಳಿತ ವಿಷಯಕ್ಕೆ ಸಂಬಂಧಿಸಿದ ಕಡತಗಳನ್ನು ನಿರ್ವಹಣೆ, ಆರ್‍ಟಿಐ ವಿಷಯದ ಕಡತಗಳು ಹಾಗೂ ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುತ್ತಿರುತ್ತಾರೆ. ಮತ್ತೊಬ್ಬ ಜ್ಯೂನಿಯರ್ ಪ್ರೋಗ್ರಾಮರ್ ರವರು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುತ್ತಿರುತ್ತಾರೆ ಹಾಗೂ ಮತ್ತೊಬ್ಬ ಜೂನಿಯರ್ ಪ್ರೋಗ್ರಾಮರ್ ವೃಂದದ ಅಧಿಕಾರಿಯು ನಿಯೋಜನೆ ಮೇಲೆ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಪ್ರೋಗ್ರಾಮಿಂಗ್ ಅಸಿಸ್ಟೆಂಟ್

ಪಬ್ಲಿಕ್ ಗ್ರೀವಿಯನ್ಸ್ ಆನ್‍ಲೈನ್ ಮತ್ತು ಇ-ಸ್ಪಂದನ, ರೂರಲ್ ಐಟಿ ಕ್ವಿಜ್, ಆರ್‍ಡಿಎಫ್-ಎಟಿಎಫ್ ಗೆ ಸಂಬಂಧಿಸಿದ ವಿಷಯಗಳು, ಸರ್ಕಾರಿ ಅಂತರ್ ಜಾಲದ ಬಗ್ಗೆ ಕಾರ್ಯನಿರ್ವಹಣೆ 

ವಿವಿಧಇಲಾಖೆಗಳಿಗೆಅನ್ಯಕಾರ್ಯನಿಮಿತ್ತ/ ನಿಯೋಜನೆ

 

1. ಒಬ್ಬರು ಸಿಸ್ಟಮ್ಸ್ ಅನಾಲಿಸ್ಟ್ ರವರು ಅನ್ಯ ಕಾರ್ಯ ನಿಮಿತ್ತ ಸಿಆಸುಇ(ಇ-ಆಡಳಿತ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಟ್ಯಾಪ್ ಸಭೆ, ಕ್ರಿಯಾ ಯೋಜನೆ ಹಾಗೂ ವೆಬ್‍ಸೈಟ್‍ಗೆ ಸಂಬಂಧಿಸಿದ ಕಾರ್ಯ ನಿರ್ವಹಿಸುತ್ತಿದ್ದಾರೆ. 

2. ಒಬ್ಬರು ಜೂನಿಯರ್ ಪ್ರೋಗ್ರಾಮರ್‍ರವರು ನಿಯೋಜನೆ ಮೇಲೆ ಪ್ರವಾಸೋದ್ಯಮ ಇಲಾಖೆ, ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

 

 

ಉದ್ದೇಶಗಳು:

 1. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ಸಂಬಂಧಿಸಿದ, ಕೆ.ಇ.ಎಸ್.ಡಿ.ಎಂ, ಸ್ಟಾರ್ಟ್-ಅಪ್ ಹಾಗೂ ಅನಿಮೇಷನ್ ಇತ್ಯಾದಿ ನೀತಿಗಳನ್ನು ಕಾರ್ಯಗತ ಮಾಡುವುದು. 
 2. ರಾಜ್ಯದ ದ್ವಿತೀಯ ಹಾಗೂ ತೃತೀಯ ದರ್ಜೆ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
 3. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಬಾಧಕವಾಗುವ ದೈನಂದಿನ ಸಮಸ್ಯೆಗಳನ್ನು ಬಗೆಹರಿಸುವುದು.
 4. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅವಶ್ಯ ನೀತಿಗಳನ್ನು ರೂಪಿಸಲು ಸಂಬಂಧಿಸಿದ ದಾರ್ಶನಿಕ ತಂಡದೊಂದಿಗೆ ಸಮಾಲೋಚಿಸಿ ಕಾರ್ಯಗತಗೊಳಿಸುವುದು.
 5. ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಕಾರ್ಯಕ್ರಮಗಳನ್ನು ರೂಪಿಸುವುದು.

 

ಸಾಧನೆಗಳು:

 

 • ಕರ್ನಾಟಕ ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮ್ಯಾನ್ಯುಫ್ಲಾಕ್ಚರಿಂಗ್ (ಇSಆಒ) ಪಾಲಿಸಿಯ ಯೋಜನೆಯಡಿಯಲ್ಲಿ 2019-20ನೇ ಸಾಲಿನಲ್ಲಿ 12 ಇಎಸ್‍ಡಿಎಂ ಕಂಪನಿಗಳು ನೊಂದಣಿಯಾಗಿರುತ್ತವೆ. 
 • ಏಪ್ರಿಲ್ 2019 ರಿಂದ ಮಾರ್ಚ್ 2020ರವರೆಗಿನ ಅವಧಿಯಲ್ಲಿ ರೂ. 1.54/- ಕೋಟಿಗಳ ಪ್ರೋತ್ಸಾಹಕಧನವನ್ನು ಇ.ಎಸ್.ಡಿ.ಎಂ ಕಂಪನಿಗಳಿಗೆ ಬಿಡುಗಡೆ ಮಾಡಲಾಗಿರುತ್ತದೆ. 
 • ಬಿ.ಟಿ.ಎಫ್.ಎಸ್ ನ್ನು ಎರಡನೇ ಘಟ್ಟದಲ್ಲಿ ಮಾರ್ಪಡಿಸಿ “ಜೈವಿಕ ತಂತ್ರಜ್ಞಾನ ಕೌಶಲ್ಯ ಉನ್ನತೀಕರಣ ಕಾರ್ಯಕ್ರಮ (ಬೈಸೆಪ್)” ಎಂಬುದಾಗಿ ಹೊಸ ನಾಮಾಂಕನಗೊಳಿಸಿ, ಕಾರ್ಯಕ್ರಮವನ್ನು ವಿಸ್ತರಿಸಿ ರಾಜ್ಯದ 8 ಜಿಲ್ಲೆಗಳಲ್ಲಿನ 18 ಶಿಕ್ಷಣ ಸಂಸ್ಥೆಗಳನ್ನು ಸೇರ್ಪಡೆಗೊಳಿಸಿ ಐದು ವರ್ಷಗಳ ಅವಧಿಗೆ ರೂ.44.17 ಕೋಟಿಗಳ ಒಟ್ಟು ಆಯವ್ಯಯದಲ್ಲಿ ಕರ್ನಾಟಕ ಸರ್ಕಾರದಿಂದ ರೂ.31.21 ಕೋಟಿಗಳು ಹಾಗೂ ಕೇಂದ್ರ ಸರ್ಕಾರದಿಂದ ರೂ.12.96 ಕೋಟಿಗಳ ಕೊಡುಗೆಯ ಪಾಲಿರುತ್ತದೆ. ಸದರಿ ಕಾರ್ಯಕ್ರಮದಡಿ, ಐದು ವರ್ಷಗಳ ಅವಧಿಯಲ್ಲಿ ಒಟ್ಟು 1800 ವಿದ್ಯಾರ್ಥಿಗಳು ಒಂಭತ್ತು ಜೈವಿಕ ತಂತ್ರಜ್ಞಾನ ವಲಯಗಳಲ್ಲಿ ತರಬೇತಿ ಹೊಂದುವ ನಿರೀಕ್ಷೆಯಿದೆ.
 • ಕೆ-ಸ್ಯಾಪ್ ಎಂಬುದು ಒಂದು ಸಮಗ್ರವಾದ, ಸರ್ವಾಂಗೀಣ ಕಾರ್ಯಕ್ರಮವಾಗಿದ್ದು, ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮಾಲಿಕ್ಯುಲಾರ್ ಪ್ಲಾಟ್‍ಫಾಮ್ರ್ಸ್ (C-CAMP)ರವರಿಂದ ಒಟ್ಟು ರೂ.333.90 ಲಕ್ಷ ವೆಚ್ಚದಲ್ಲಿ 3 ವರ್ಷಗಳ ಯೋಜನಾ ಅವಧಿಯಲ್ಲಿ 50 ಸ್ಟಾರ್ಟ್‍ಅಪ್‍ಗಳ ಗುರಿ ಹೊಂದಿರುವ ಉಪಕ್ರಮವಾಗಿದೆ. ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರವನ್ನು ಸಮನ್ವಯ ಅನುಷ್ಟಾನ ಅಂಗಸಂಸ್ಥೆಯಾಗಿ ಗುರುತಿಸಲಾಗಿದ್ದು, ಅ-ಅಂಒP ಅದರ ಅನುಷ್ಟಾನದ ಪಾಲುದಾರವಾಗಿರುತ್ತದೆ.
 • ಜೈವಿಕ ತಂತ್ರಜ್ಞಾನ ಕೈಗಾರಿಕೆಗಳ ಸಂಶೋಧನಾ ಸಹಾಯ ಮಂಡಳಿ (BIRAC) ಯ ಬೆಂಬಲವಿರುವ ಮೆಡ್‍ಟೆಕ್ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, BIRACನ ಬೆಂಬಲವಿರುವ ಮತ್ತೊಂದು ಕಾರ್ಯಕ್ರಮವಾದ SEED funding ಸದ್ಯದಲ್ಲೇ ಕಾರ್ಯಾಚರಣೆಗೊಳ್ಳುವ ನಿರೀಕ್ಷೆಯಿದೆ. ರೂ.4.5 ಕೋಟಿಗಳನ್ನು (BIRAC) ಬೆಂಬಲದ ಮೆಡ್‍ಟೆಕ್ ಸೌಲಭ್ಯಕ್ಕೆ, ರೂ.1.0 ಕೋಟಿಯನ್ನು (BIRAC) ಬೆಂಬಲವೇ ಇರುವ SEED fund ಗಾಗಿ ಮತ್ತು ನೂತನ ಉನ್ನತ ಮಟ್ಟದ ಉಪಕರಣಗಳ ಖರೀದಿಗಾಗಿ ರೂ.3.0 ಕೋಟಿಗಳ ಮೊತ್ತವನ್ನು ಒಟ್ಟು ರೂ.8.5 ಕೋಟಿಗಳಷ್ಟು ಸರಿದೂಗಿಸುವ ಅನುದಾನವನ್ನು ಬಿ.ಬಿ.ಸಿಗೆ ಮಂಜೂರು ಮಾಡಲಾಗಿದೆ.
 • ಕೃಷಿ ವಲಯದಲ್ಲಿ ನಾವೀನ್ಯತೆ, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಜನೆಗೆ ಮಾರ್ಗ ಕಲ್ಪಿಸುವ deep-science/ತಂತ್ರಜ್ಞಾನ ಪ್ರೇರಿತ ವಾಣಿಜ್ಯೋದ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು Centre for Cellular & Molecular Platforms (C-CAMP)ಗಳ ನಡುವೆ ಸಹಭಾಗಿತ್ವದೊಂದಿಗೆ ಕೃಷಿ ನಾವೀನ್ಯತೆ ಕುರಿತ ಉತ್ಕøಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು.
 • ಖಾಸಗಿ ಸಂಸ್ಥೆಯ ಪಾಲುದಾರಿಕೆಯ ಹಾಗೂ ಕರ್ನಾಟಕ ಸರ್ಕಾರದ ಪಾಲುದಾರಿಕೆಯ ಮೂಲಕ ಪರಿಪೋಷಣಾ ಮೂಲಸೌಕರ್ಯವನ್ನು ಸೃಷ್ಟಿ ಮಾಡುವ ಸಲುವಾಗಿ ನ್ಯಾಸ್ಕಾಂನಲ್ಲಿ ಕರ್ನಾಟಕ ಸರ್ಕಾರ ಸ್ಟಾರ್ಟ್‍ಅಪ್ ವೇರ್‍ಹೌಸ್‍ನಲ್ಲಿ 55 ನವೋದ್ಯಮಗಳ ಪರಿಪೋಷಣೆ, ಐಎಎಂಎಐನಲ್ಲಿ ಕರ್ನಾಟಕ ಸರ್ಕಾರ ಮೊಬೈಲ್ 10x ಅಕ್ಸಲರೇಟರ್‍ನ 22 ನವೋದ್ಯಮಗಳ ಪರಿಪೋಷಣೆ, ಕರ್ನಾಟಕ ಸರ್ಕಾರ, ನ್ಯಾಸ್ಕಾಂ, ಡೈಟಿ ಐಓಟಿ, ಸೆಂಟರ್ ಆಫ್ ಎಕ್ಸ್‍ಲೆನ್ಸ್‍ನ 8 ನವೋದ್ಯಮಗಳ ಪರಿಪೋಷಣೆ, ಪಿಪಿಪಿ-91 ಸ್ಪ್ರಿಂಗ್ ಬೋರ್ಡ್ ಪರಿಪೋಷಕಗಳ 32 ನವೋದ್ಯಮಗಳ ಪರಿಪೋಷಣೆ, ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದಲ್ಲಿ 17 ನವೋದ್ಯಮಗಳ ಪರಿಪೋಷಣೆ, ಐಬಿಎಬಿನಲ್ಲಿ 7 ನವೋದ್ಯಮಗಳ ಪರಿಪೋಷಣೆ, ಕಲ್ಬುರ್ಗಿಯಲ್ಲಿ 7 ನವೋದ್ಯಮಗಳ ಪರಿಪೋಷಣೆ ಹಾಗೂ ರಾಜ್ಯಾದಾದ್ಯಂತ ಅನುಮೋದಿತ ಕಾಮನ್ ಇನ್ಸ್‍ಟ್ರುಮೆಂಟೇಷನ್ ಸೌಲಭ್ಯವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿರುತ್ತದೆ.
 

ಇತ್ತೀಚಿನ ನವೀಕರಣ​ : 26-07-2022 11:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080